ಕಾಜಪುಟೆ ಮರ ಮಲಯ,ಆಸ್ಟ್ರೇಲಿಯ ಮತ್ತು ಕಾಂಬೋಡಿಯಗಳು ತವರೂರಾದ ನಿತ್ಯಹರಿದ್ವರ್ಣದ ಮರ. == ವೈಜ್ಞಾನಿಕ ಹೆಸರು == ಮಿರ್ಟೇಸಿ ಕುಟುಂಬಕ್ಕೆ ಸೇರಿದೆ. ಮೆಲಲ್ಯೂಕ ಲ್ಯೂಕೊಡೆಂಡ್ರಾನ್ ಎಂಬುದು ಸಸ್ಯಶಾಸ್ತ್ರೀಯ ಹೆಸರು. == ಲಕ್ಷಣಗಳು == ನಿತ್ಯ ಹರಿದ್ವರ್ಣದ ಮರ.ಮೃದುವಾದ ತೊಗಟೆ ಇದೆ.ತೊಗಟೆಯನ್ನು ಸುಲಿದರೆ ಕಾಗದಂತೆ ಕಿತ್ತು ಬರುತ್ತದೆ.ಎಲೆಗಳಲ್ಲಿ ಎಣ್ಣೆ ಗ್ರಂಥಿಗಳಿವೆ. == ಭೌಗೋಳಿಕ ಹಂಚಿಕೆ == ಉತ್ತರ-ಪಶ್ವಿಮ ಆಸ್ಟ್ರೇಲಿಯ,ಸೊಲೊಮನ್ ದ್ವೀಪಗಳು ,ಕಾಂಬೋಡಿಯ ಮತ್ತು ನ್ಯೂಗಿನಿಯಗಳಲ್ಲಿ ಸ್ವಾಭಾವಿಕ ಸಸ್ಯ.ಹಲವು ಕಡೆಗಳಲ್ಲಿ ದಾರಿಬದಿ ಸಸ್ಯವಾಗಿ, ಉದ್ಯಾನಗಳಲ್ಲಿ ಅಲಂಕಾರಕ್ಕೆ ಬೆಳೆಸುತ್ತಾರೆ. == ಉಪಯೋಗಗಳು == ಇದರ ತೊಗಟೆಯನ್ನು ಮೀನಿನ ಬಲೆಮಾಡಲು,ಚಾಪೆ ಮಾಡಲು ಬಳಸುತ್ತಾರೆ.ಮರ ರೈಲ್ವೇ ಸ್ಲೀಪರ್‍ಗಳಾಗಿ ಬಳಕೆಯಲ್ಲಿದೆ. == ಔಷಧೀಯ ಗುಣಗಳು == ಇದರ ಎಲೆಯಿಂದ ಪಡೆಯುವ ಎಣ್ಣೆಯಲ್ಲಿ ಹೇರಳವಾದ ಔಷಧೀಯ ಗುಣಗಳಿವೆ.ವ್ರಣಗಳ, ಸುಟ್ಟಗಾಯಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. == ಬಾಹ್ಯ ಸಂಪರ್ಕಗಳು == ಟೆಂಪ್ಲೇಟು: